ಪಥ -
ನಿರ್ದಿಷ್ಟ ಬಲಗಳ ಪ್ರಭಾವಕ್ಕೆ ಒಳಪಟ್ಟು ಆಕಾಶದ (ಸ್ಪೇಸ್) ಮೂಲಕ ಚಲಿಸುವ ಕಾಯ ರೇಖಿಸುವ ಮಾರ್ಗರೇಖೆ (ಟ್ರಜೆಕ್ಟರಿ). ಇಂಗ್ಲೆಂಡಿನ ಗಣಿತಜ್ಞ ಐಸಾಕ್ ನ್ಯೂಟನ್ (1642-1727) ನಿರೂಪಿಸಿದ ಚಲನೆಯನಿಯಮಗಳ ರೀತ್ಯ ಆಕಾಶÀದ ಮೂಲಕ ಚಲಿಸುವ ಕಾಯದ ಪಥ ಅದರ ಪ್ರಾರಂಭಿಕ ವೇಗವನ್ನೂ (ಇನಿಷಿಯಲ್ ವೆಲಾಸಿಟಿ) ಅದರ ಮೇಲೆ ಪ್ರಭಾವ ಬೀರುವಂಥ ಇತರ ಬಾಹ್ಯಬಲಗಳನ್ನೂ ಆಧರಿಸಿರುತ್ತದೆ. ಗುರುಕ್ಷೇತ್ರದಲ್ಲಿ ಚಲಿಸುವ ಕಾಯದ ಪಥ, ಉದಾಹರಣೆಗೆ ಸೌರ ಗುರುತ್ವ ಕ್ಷೇತ್ರದಲ್ಲಿ ಚಲಿಸುವ ಭೂಮಿಯ ಪಥ, ಶಂಕುಜವಾಗಿರುತ್ತದೆ.								*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ